Thursday, June 28, 2012

ನೀ ಬರುವ ದಾರಿ

ನೀ ಬರುವ ದಾರಿಯಲ್ಲಿ ಹೂ ಮಳೆ ಸುರಿಯಲಿ 

ನಿನ್ನ ಮೊಗವು ಬೆಳದಿಂಗಳ ಚಂದ್ರನಂತೆ ಹೊಳೆಯುತಿರಲಿ 

ನಿನ್ನ ತುಟಿ ಅಂಚಲಿ ಸದಾ ನಗು ಕಾಣುತಿರಲಿ 

ನಿನ್ನ ಕೂದಲು ತಂಗಾಳಿಯಲಿ ಹಾರುತಿರಲಿ 

ನಿನ್ನ ಕಂಗಳು ಪ್ರೀತಿಯ ಹುಡುಕುತಿರಲಿ 

ನಿನ್ನ ಮಾತಲ್ಲಿ ಹಾಲು ಜೇನು ತುಂಬಿ ಬರಲಿ 

ನಿನ್ನ ಜೀವವು ಆಸರೆ ಬಯಸುತಿರಲಿ 

ಅನುರಾಗದ ಅಲೆಗಳು ಮೂಡಿ ಬರಲಿ 

ಮುಂಜಾನೆ ಮಂಜು

ಮುಂಜಾನೆ ಮಂಜಿನ ಇಬ್ಬನಿಯ 


ಚುಮು ಚುಮು ಮಾಗಿಯ ಚಳೀಯ 


ಹೊಂಬಿಸಿಲ ಕಿರಣದ ಅಪ್ಪುಗೆಯ 


ಇಬ್ಬನಿಗೆ ಥಳ ಥಳ ಹೊಳೆಯುವ ಹುಲ್ಲಿನ ಹಾಸುಗೆಯ 


ಗೆಳತಿ ನಿನ್ನ ಒಡನಾಟವ ಬಯಸಿದೆ ನೀ ಬರುವೆಯ 


ಆಹಾ ಈ ಮಧುರ ಕ್ಷಣಕೆ ಸ್ವಾಗತವ ಕೊರುವೆಯ 


ಈ ಬಾಳಿಗೆ ನೀ ಬೆಳಕಾಗಿ ಬರುವೆಯ 


ನಿನ್ನ ಆಗಮನಕ್ಕೆ ಕಾಯುತಿದೆ ಈ ಹೃದಯ 

Wednesday, June 20, 2012

ಮನದ ಬಯಕೆ

ಮನ ಬಯಸಿದೆ ಚೆಲುವಿನ ತಾರೆ 


ವಲವು ಬೇಡಿದೆ ಪ್ರೀತಿಯ ಧಾರೆ 


ಓ ಜೀವ ನೀ ನನ್ನ ಉಸಿರೆ 


ಸಾಕು ನಿನ್ನ ಮೌನದ ಮೋರೆ 


ನೀ ಮುಗುಳ್ ನಗುತ ನನ್ನ ಹತ್ತಿರ ಬಾರೆ 


ನನ್ನ ಹೃದಯಕೆ ಪ್ರೀತಿಯ ಬೆಳಕನು ತೊರೆ 


ಜೀವಕೆ ಜೀವ ನೀನಾಗು ಮನಸಾರೆ 

Wednesday, June 13, 2012

ನಿನ್ನ ಹಂಬಲ

ನಿನ್ನ ನಗುವನು ಕಾಣುವ ಹಂಬಲ 


ಬಯಸದೇ ಬಂದ ಭಾಗ್ಯದ ಭಾವನೆಗಳ  


ಒಲವಿನ ಸಾಗರದ ಅಲೆಗಳ 


ತುಸು ದೂರ ನೀ ಹೋದರೆ ಕಳವಳ 


ಬಾ ಇನ್ನು ಹತ್ತಿರ ಮನದಲಿ ತಳಮಳ 

Friday, December 2, 2011

ಮುಂಗಾರಿನ ಮಳೆ

ಚಿಟಪಟ ತೊಟ್ಟಿಕ್ಕುವ ಮುಂಗಾರಿನ ಮಳೆ

ದರೆ ಇಳಿದು ಬಾ ಭುವಿಗೆ ಪ್ರೀತಿಯ ಹೊಳೆ

ಪ್ರೇಮಿಗಳಿಗೆ ಸಂತೋಷ ಸಡಗರದ ಕಳೆ

ಜೊತೆ ಜೊತೆ ಉಲ್ಲಾಸ ಸಂಬ್ರಮದ ಸೆಳೆ

Thursday, February 11, 2010

ಮನದ ಚಿಂತೆ

ಗೆಳತಿ ನನಗೆ ನೀ ಜೊತೆಗಿಲ್ಲದ ಚಿಂತೆ

ಜೊತೆಗಿದ್ದರೂ ನಿನ್ನ ಮೌನದ ಒಲವಿನಂತೆ

ನಾ ಹೇಳ ಬಯಸಿದರೂ ನಿನ್ನ ನಗುವಿನ ಮಳೆ ಸುರಿದಂತೆ

ಹೇಳಲಾಗದೆ ನನ್ನಲ್ಲಿ ನಾ ನಿನ್ನ ಕಳ ಕೊಂಡಂತೆ

ಬಯಸಿ ಬಯಸಿ ನಿನ್ನ ಬಳಿ ಬಂದೆರೆ ನೀ ಅಲ್ಲೇ ಮರೆಯಾದಂತೆ

Wednesday, December 23, 2009

ಜೀವನಕ್ಕೆ ಜೀವ ನೀ ಬಂದಾಗ

ಒಲಿದು ಬಾ ನೀ ನನ್ನೆಡೆಗೆ ನಗುತ

ಜಿಗಿದು ಬಾ ನೀ ನನ್ನ ಬಾಳನು ಬೆಳಗುತ

ನನ್ನ ಬದುಕ ಕತ್ತಲೆಗೆ ಬೆಳಕ ಚೆಲ್ಲುತ

ನನ್ನ ಹೃದಯಕ್ಕೆ ನೀನಾಗು ಮಿಡಿತ

ಬದುಕಿನ ಸಾಗರದಲ್ಲಿ ಒಂದಾಗಿ ತೇಲುತ

ಬಾಳಿನ ಪುಟದಲ್ಲಿ ಜೊತೆಯಾಗಿ ಸಾಗುತ

ಆಗಸದ ಪ್ರೀತಿಯ ಹಕ್ಕಿಗಳಂತೆ ಹಾರುತ

ನಮ್ಮ ಕಲ್ಪನೆಯ ಜೇನು ಗೂಡನು ಕಟ್ಟುತ

ಕುಣಿದು ನಲಿದು ಜೊತೆಜೊತೆಯಾಗಿ ಬಾಳುತ